ಟೆರಿ
ಲಿನನ್ ಅಥವಾ ಹತ್ತಿನೂಲುಗಳಿಂದ ತಯಾರಿಸಲಾದ ಹಾಸಿನ ಉದ್ದ ಎಳೆಗಳ ಗುಂಜು ವಸ್ತ್ರಗಳ ಒಂದು ವರ್ಗ. ಜಮಖಾನ, ಹೊದಿಕೆ ಬಟ್ಟೆ, ಟವಲು ಮುಂತಾದವುಗಳ ರಚನೆಯಲ್ಲಿ ಇದರ ಬಳಕೆ ಉಂಟು. ಟೆರಿ ವಸ್ತ್ರದ ಮುಂಭಾಗ ಮತ್ತು ಹಿಂಭಾಗಗಳಲ್ಲಿ ಉಂಟಾಗುವ ಪುಟ್ಟ ಪುಟ್ಟ ಕತ್ತರಿಸದ ಕುಣಿಕೆಗಳನ್ನು ಇಲ್ಲಿ ಬಳಕೆಯಾಗುವ ಗುಂಜು ಹೊಂದಿರುತ್ತದೆ; ಕೆಲವು ಸಂದರ್ಭಗಳಲ್ಲಿ ಈ ಗುಂಜು ಮುಂಭಾಗ ಅಥವಾ ಹಿಂಭಾಗದಲ್ಲಿ ಮಾತ್ರ ಕಂಡುಬರಬಹುದು. ಒಂದು ಸರಣಿ ಹೊಕ್ಕಿನೊಂದಿಗೆ (ಅಡ್ಡ ಎಳೆಗಳೊಂದಿಗೆ) ಗುಂಜು ಹಾಸು ಮತ್ತು ಆಧಾರ ತಲಹಾಸನ್ನು (ಉದ್ದ ಎಳೆಗಳನ್ನು) ಹೆಣೆಯುವ ಒಂದು ವಿಶಿಷ್ಟ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರಿಂದ ಕುಣಿಕೆಗಳು ರೂಪುಗೊಳ್ಳುತ್ತವೆ. ವಿಶಿಷ್ಟವಾದ ತಟ್ಟಿನ ಚಲನೆ ಮತ್ತು ಗುಂಜು ಹಾಸನ್ನು ಸಡಿಲಿಸುವ ಉಪಕರಣಗಳಿರುವ ಟರ್ಕಿಷ್ ಟವಲಿಂಗ್ ಮಗ್ಗವನ್ನು ಇದಕ್ಕಾಗಿ ಬಳಸುತ್ತಾರೆ. ಈ ವಸ್ತ್ರಗಳ ಉತ್ಪಾದನೆಯಲ್ಲಿನ ಅತಿ ಸರಳವಾದ 3 ಪಿಕ್ ಟೆರಿ ನೇಯ್ಗೆಯ ವಿಪುಲ ಬಳಕೆ ಇದೆ.								(ಡಿ.ವಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ